ಹಳೆಯಂಗಡಿ ಪಿಸಿಎ ಬ್ಯಾಂಕ್ ಅಧ್ಯಕ್ಷರಾಗಿ ಎಸ್.ಎಸ್. ಸತೀಶ್ ಭಟ್, ಉಪಾಧ್ಯಕ್ಷರಾಗಿ ಮೀರಾ ಬಾಯಿ ಕೆ. ಆಯ್ಕೆ (S.S. Satish Bhatt elected as President of Haleangady PCA Bank, Meera Bai K. elected as Vice President)

ಹಳೆಯಂಗಡಿ ಪಿಸಿಎ ಬ್ಯಾಂಕ್ ಅಧ್ಯಕ್ಷರಾಗಿ ಎಸ್.ಎಸ್. ಸತೀಶ್ ಭಟ್, ಉಪಾಧ್ಯಕ್ಷರಾಗಿ ಮೀರಾ ಬಾಯಿ ಕೆ. ಆಯ್ಕೆ
ಹಳೆಯಂಗಡಿ: ಹಳೆಯಂಗಡಿ ಪಿಸಿಎ ಬ್ಯಾಂಕ್ ನ 2025 – 29 ನೇ ಸಾಲಿನ ನೂತನ ಅಧ್ಯಕ್ಷರಾಗಿ ಎಸ್.ಎಸ್. ಸತೀಶ್ ಭಟ್ ಹಾಗೂ ಉಪಾಧ್ಯಕ್ಷರಾಗಿ ಮೀರಾ ಬಾಯಿ ಕೆ. ಸತತ ಮೂರನೇ ಬಾರಿಗೆ ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ.
ಹಳೆಯಂಗಡಿಯ ಪಿಸಿಎ ಬ್ಯಾಂಕ್ ಸಭಾಭವನದಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿಯಾಗಿ ಮಂಗಳೂರು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ನಾಗೇಂದ್ರ ಬಿಯವರು ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿದರು.
ಸಂಘದ ನೂತನ ನಿರ್ದೇಶಕರಾಗಿ ವಿನೋದ್ ಕುಮಾರ್ ಬೊಳ್ಳೂರು, ಎಚ್ ವಸಂತ್ ಬೆರ್ನಾಡ್, ಧರ್ಮಾನಂದ ಶೆಟ್ಟಿಗಾರ್, ಅಶೋಕ್ ಬಂಗೇರ, ಸೇಸಪ್ಪ ಟಿ ಸಾಲ್ಯಾನ್, ಸಂಧ್ಯಾ, ಮುಕೇಶ್ ಸುವರ್ಣ, ಶಿವರಾಮ, ರೋಶನ್ ಬಿ, ಧನಂಜಯ ಹಾಗೂ ಆರ್ಥಿಕ ಬ್ಯಾಂಕಿನ ಪ್ರತಿನಿಧಿಯಾಗಿ ಕಿರಣ್ ಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಿಮಕರ್, ಜೊತೆ ಕಾರ್ಯದರ್ಶಿ ಶ್ರೀಕಾಂತಿ ಚುನಾವಣಾ ಪ್ರಕ್ರಿಯೆಗೆ ಸಹಕರಿಸಿದರು.
ನೂತನ ಅಧ್ಯಕ್ಷರಾದ ಸತೀಶ್ ಭಟ್ ಮಾಧ್ಯಮದೊಂದಿಗೆ ಮಾತನಾಡಿ, ಸಂಘವು ಈಗಾಗಲೇ ಒಂದು ಕೋಟಿ ಲಾಭದಲ್ಲಿದ್ದು ಮುಂದಿನ ಐದು ವರ್ಷಗಳಲ್ಲಿ 2 ಕೋಟಿ ಲಾಭದ ಜೊತೆಗೆ ಸಂಘದ ಅಭಿವೃದ್ಧಿಗೆ ಪ್ರಾಧಾನ್ಯತೆ ನೀಡಲಾಗುವುದು ಎಂದರು.
ಈ ಸಂದರ್ಭ ಪಡುಪಣಂಬೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮೋಹನ್ ದಾಸ್, ಬಿಜೆಪಿ ನಾಯಕರಾದ ಹಿಮಕರ್ ಕದಿಕೆ, ಮನೋಜ್ ಕುಮಾರ್ ಕೆಲಸಿ ಬೆಟ್ಟು, ಯೋಗೇಶ್ ಪಾವಂಜೆ, ಸಾವಿತ್ರಿ ಗೋಪಾಲ್, ರೇಣುಕಾ ಸಂಜಯ್, ಹರಿಪ್ರಸಾದ್, ಸುರೇಶ್ ಅಂಬಡೆಗುರಿ, ಅಬ್ದುಲ್ ರಜಾಕ್ ಮತ್ತಿತರರು ಉಪಸ್ಥಿತರಿದ್ದು, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಅಭಿನಂದಿಸಿದ್ದಾರೆ.