# Tags
#ಅಪರಾಧ

ಶಿರ್ವ: ಕಟ್ಟಿಂಗೇರಿಯಲ್ಲಿ ಶಿಲುಬೆ ದ್ವಂಸ : ದೂರು

ಶಿರ್ವ: ಕಟ್ಟಿಂಗೇರಿಯಲ್ಲಿ ಶಿಲುಬೆ ದ್ವಂಸ : ದೂರು (Shirva: Cross vandalized in Kattingeri : Complaint)

ಶಿರ್ವ: ಕಟ್ಟಿಂಗೇರಿಯಲ್ಲಿ ಶಿಲುಬೆ ದ್ವಂಸ : ದೂರು

(Shirva) ಶಿರ್ವ:  ಶಿರ್ವ ಗ್ರಾಮದ ಕಟ್ಟಿಂಗೇರಿಯ ಕುದುರೆಮಲೆ ಎಂಬಲ್ಲಿಯ ಖಾಸಗಿ ಸ್ಥಳದಲ್ಲಿದ್ದ ಶಿಲುಬೆಯೊಂದನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಫೆಬ್ರವರಿ 19 ರಂದು ಕಟ್ಟಿಂಗೇರಿ ಗ್ರಾಮದ ಕುದುರೆಮಲೆ ಬೆಟ್ಟದಲ್ಲಿದ್ದ ಪವಿತ್ರ ಶಿಲುಬೆಯನ್ನು ಯಾರೋ  ದುಷ್ಕರ್ಮಿಗಳು ಕೆಡವಿ ದ್ವಂಸ ಮಾಡಿದ್ದಾರೆ. ಈ ಪವಿತ್ರ ಶಿಲುಬೆಯು ಕ್ರೈಸ್ತ ಸಮುದಾಯದ ಹಾಗೂ ಕುಟುಂಬದ ಪೂಜಾ ಸ್ಥಳವಾಗಿದ್ದು, ಧಾರ್ಮಿಕ ಪವಿತ್ರತೆಗೆ ಒಳಗೊಂಡಿದೆ. ಇದರಿಂದ ಕೃತ್ಯದಿಂದ ತಮಗೆ ಅಘಾತವಾಗಿದ್ದು ಕ್ರೈಸ್ತ ಧರ್ಮಕ್ಕೆ ಅಪಮಾನವಾಗಿದೆ. ಹಾಗೂ ತಮ್ಮ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ  ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಎಂದು ಕಟ್ಟಿಂಗೇರಿ ನಿವಾಸಿ ಪ್ಲಾಲೀವನ್  ಎಂಬವರು ಶಿರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಶಿರ್ವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

Leave a comment

Your email address will not be published. Required fields are marked *

Emedia Advt3