ಮಂಗಳೂರು ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ ಮಹಾ ಮೃತ್ಯುಂಜಯ ಹೋಮ

ಮಂಗಳೂರು: ಮಹಾ ಶಿವರಾತ್ರಿಯ ಪವಿತ್ರ ಸಂದರ್ಭದಲ್ಲಿ ಸೂರ್ಯೋದಯದ ನಂತರ ಪ್ರಶಾಂತ ಮುಂಜಾವಿನ ಶುಭ ಗಳಿಗೆಯಲ್ಲಿ ಮಂಗಳೂರಿನ ಮಾತಾ ಅಮೃತಾನಂದಮಯಿ ಮಠ ಇದರ ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ ಮಹಾ ಮೃತ್ಯುಂಜಯ ಹೋಮವನ್ನು ಶ್ರದ್ಧಾ ಭಕ್ತಿಯೊಂದಿಗೆ ನಡೆಸಲಾಯಿತು. ಆರೋಗ್ಯ, ಸಮೃದ್ಧಿ ಮತ್ತು ಆಧ್ಯಾತ್ಮಿಕ ಯೋಗಕ್ಷೇಮಕ್ಕಾಗಿ ನಡೆಸಲಾದ ಈ ಪ್ರಬಲ ವೈದಿಕ ಆಚರಣೆಯಲ್ಲಿ ನೂರಾರು ಭಕ್ತಾಭಿಮಾನಿಗಳು ಭಾಗವಹಿಸಿ ಶ್ರೀ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ರವರು ಉಪಸ್ಥಿತರಿದ್ದರು. ಮಾತಾ ಅಮೃತಾನಂದಮಯಿ ಸೇವಾ ಸಮಿತಿ, ಮಂಗಳೂರು ಇದರ ಅಧ್ಯಕ್ಷ ಸುರೇಶ್ ಅಮೀನ್, ಸೇವಾ ಸಮಿತಿ ಸದಸ್ಯರ ಗೌರವಾನ್ವಿತ ಉಪಸ್ಥಿತಿಯೊಂದಿಗೆ ಸಮಾರಂಭ ಸುಸೂತ್ರವಾಗಿ ನೆರವೇರಿತು. ಬ್ರಹ್ಮಚಾರಿ ರತೀಶ್ ಅವರು ಪವಿತ್ರ ಮಂತ್ರಗಳೊಂದಿಗೆ ಹೋಮಾದಿ ಕೈಂಕರ್ಯಗಳನ್ನು ನೆರವೇರಿಸಿದರು.