# Tags
#ಧಾರ್ಮಿಕ #ವಿಡಿಯೋ

ನಡಿಕುದ್ರು ಧರ್ಮದೈವ ಜಾರಂದಾಯ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಸಂಪನ್ನ (The annual Nemotsava festival at the Nadikudru Dharmadaiva Jarandaya Daivasthana)  

ನಡಿಕುದ್ರು ಧರ್ಮದೈವ ಜಾರಂದಾಯ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಸಂಪನ್ನ

(Hejamadi) ಹೆಜಮಾಡಿ: ಇತಿಹಾಸ ಪ್ರಸಿದ್ಧ ನಡಿಕುದ್ರು ಧರ್ಮದೈವ ಜಾರಂದಾಯ ದೈವಸ್ಥಾನದಲ್ಲಿ ವಾರ್ಷಿಕ ಭಜನಾ ಮಂಗಲೋತ್ಸವ ಹಾಗೂ ಧರ್ಮದೈವದ ನೇಮೋತ್ಸವ ವಿಜೃಂಭಣೆಯಿಂದ ನೆರವೇರಿತು.

 ಬೆಳಿಗ್ಗೆ ಪಂಚಕಜ್ಜಾಯ ಸೇವೆ, ಭಜನಾ ಕಾರ್ಯಕ್ರಮ, ಮಂಗಲೋತ್ಸವ, ಪ್ರಸಾದ ವಿತರಣೆ, ಮರುದಿನ ಬೆಳಿಗ್ಗೆ ನವಕ ಕಲಶಾಭಿಷೇಕ, ನಾಗದೇವರಿಗೆ ಕ್ಷೀರಾಭಿಷೇಕ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನೆರವೇರಿತು.

 ಸಂಜೆ ಭಂಡಾರ ಇಳಿದು, ಮೈಸಂದಾಯ ಹಾಗೂ ಧರ್ಮದೈವ ಜಾರಂದಾಯ ಮತ್ತು ಬಂಟ ಪರಿವಾರದ ದೈವಗಳ ಅಂಗಣ ನೇಮೋತ್ಸವ ನೆರವೇರಿತು.

 ಈ ಸಂದರ್ಭ ಅರ್ಚಕರು, ಗಂಗೆ ಬೈದೆತಿ ನಟ್ಟಿ ಸಾನದ ಮನೆ, ಗ್ರಾಮದ ಗುರಿಕಾರರು ಮತ್ತು ಹತ್ತು ಸಮಸ್ತರು, ಜಾರಂದಾಯ ಸೇವಾ ಯುವಕ ವೃಂದ ಮತ್ತು ಮಹಿಳಾ ವೃಂದ ನಡಿಕುದ್ರು ಇದರ ಸದಸ್ಯರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt3