ಬಂಟ್ವಾಳ: ಆತ್ಮರಕ್ಷಣೆಯ ರಿವಾಲ್ವರ್ ಗುಂಡು ಸಿಡಿದು ಕಾಂಗ್ರೆಸ್ ಮುಖಂಡ ಬೊಂಡಾಲ ಚಿತ್ತರಂಜನ್ ಶೆಟ್ಟಿಗೆ ಗಾಯ (Bantwala: Congress leader Bondala Chittaranjan Shetty injured in self-defense revolver fire)
ಬಂಟ್ವಾಳ: ಆತ್ಮರಕ್ಷಣೆಯ ರಿವಾಲ್ವರ್ ಸಿಡಿದು ಕಾಂಗ್ರೆಸ್ ಮುಖಂಡ ಬೊಂಡಾಲ ಚಿತ್ತರಂಜನ್ ಶೆಟ್ಟಿಗೆ ಗಾಯ (Bantwala) ಬಂಟ್ವಾಳ: ಆತ್ಮರಕ್ಷಣೆಗಾಗಿ ಪಡೆದಿದ್ದ ರಿವಾಲ್ವರ್ ಅಚಾನಕ್ಕಾಗಿ ಸಿಡಿದು ಕಾಂಗ್ರೆಸ್ ಮುಖಂಡ ಬೊಂಡಾಲ ಚಿತ್ತರಂಜನ್ ಶೆಟ್ಟಿ ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ.ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಮಾಜಿ ಇಂಟಕ್ ಮುಖಂಡ ಬೊಂಡಾಲ ಚಿತ್ತರಂಜನ್ ಶೆಟ್ಟಿಯವರು ಇತ್ತೀಚೆಗಷ್ಟೇ ತನ್ನ ಆತ್ಮರಕ್ಷಣೆಗಾಗಿ ಪರವಾನಗಿ ಪಡೆದು ರಿವಾಲ್ವರ್ ಇಟ್ಟುಕೊಂಡಿದ್ದರು. ವಿಟ್ಲ ಠಾಣಾ ವ್ಯಾಪ್ತಿಯ ಅನಂತಾಡಿ ಬಳಿ ತನ್ನ ಪ್ಯಾಂಟಿನ ಕಿಸೆಯಲ್ಲಿರಿಸಿದ್ದ ತನ್ನದೇ ರಿವಾಲ್ವರ್‌ನ ಗುಂಡು ಆಕಸ್ಮಿಕವಾಗಿ […]