# Tags
#ತಂತ್ರಜ್ಞಾನ #ರಾಜಕೀಯ

  ಪಡುಬಿದ್ರಿ ಅಗ್ನಿಶಾಮಕ ಠಾಣಾ ಕಟ್ಟಡ ನಿರ್ಮಾಣಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗುದ್ದಲಿ ಪೂಜೆ (Kapu MLA Gurme Suresh Shetty Guddali Puja for Padubidri Fire Station Building)

  ಪಡುಬಿದ್ರಿ ಅಗ್ನಿಶಾಮಕ ಠಾಣಾ ಕಟ್ಟಡ ನಿರ್ಮಾಣಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗುದ್ದಲಿ ಪೂಜೆ

ಪಡುಬಿದ್ರಿ : ಪಡುಬಿದ್ರಿ ಬಳಿಯ ಹೆಜಮಾಡಿ ಬಳಿ ಕೆ-ಸೇಫ್-2 ಯೋಜನೆಯಡಿ ಅಗ್ನಿಶಾಮಕ ಠಾಣಾ ಕಟ್ಟಡ ನಿರ್ಮಾಣಕ್ಕೆ 2.33 ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದು, ಇದರ ಗುದ್ದಲಿ ಪೂಜೆಯನ್ನು ಶುಕ್ರವಾರ ಸಂಜೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ  ನೆರವೇರಿಸಿದರು.

 ಹೆಜಮಾಡಿಯ ಅರ್ಚಕ ಸುಕೀರ್ತಿ ಆಚಾರ್ಯ ಪೂಜಾವಿಧಿಗಳನ್ನು ನೆರವೇರಿಸಿದರು.

 ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ನಿರಂತರ ಪ್ರಯತ್ನದಿಂದ ಪಡುಬಿದ್ರಿ ಅಗ್ನಿಶಾಮಕ ಠಾಣಾ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ.

ಈ ಸಂದರ್ಭದಲ್ಲಿ ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಶ್ಮಾ ಎ ಮೆಂಡನ್, ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಕಲಾ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಹೆಜಮಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮೋಹನ್ ಸುವರ್ಣ, ಪಡುಬಿದ್ರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹೇಮಚಂದ್ರ, ಶಶಿಕಾಂತ ಪಡುಬಿದ್ರಿ, ಶರಣ್‌ಕುಮಾರ ಮಟ್ಟು, ಶಿವಪ್ರಸಾದ್‌ ಶೆಟ್ಟಿ ಎಲ್ಲದಡಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪಲಿಮಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಯೇಶ್ ಪೈ, ಅಗ್ನಿಶಾಮಕ ಉಡುಪಿ ವಿಭಾಗಾಧಿಕಾರಿ ಅಲ್ಬರ್ಟ್‌ ಮೋನಿಸ್‌, ಮಂಗಳೂರು ವಿಭಾಗಾಧಿಕಾರಿ ಬಿಎಂ ತಿರುಮಲೇಶ್, ಹೆಜಮಾಡಿ, ಪಡುಬಿದ್ರಿ, ಪಲಿಮಾರು ಗ್ರಾಮ ಪಂಚಾಯತ್ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt3