ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದಲ್ಲಿ ಉತ್ಸವದ ಧ್ವಜಾರೋಹಣ ಸಂಪನ್ನ(The festival flag hoisting ceremony at Padubidri Sri Mahalingeshwara Mahaganapati Temple is complete)

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದಲ್ಲಿ ಉತ್ಸವದ ಧ್ವಜಾರೋಹಣ ಸಂಪನ್ನ
(PHOTO CREDIT : RAVI DIGITALS, PADUBIDRI)
(Padubidri) ಪಡುಬಿದ್ರಿ, ಮಾ. 14: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶುಕ್ರವಾರ ಬೆಳಿಗ್ಗೆ ಧ್ವಜಾರೋಹಣವು ಶ್ರೀಕ್ಷೇತ್ರದ ತಂತ್ರಿಗಳಾದ ಕಂಬ್ಳಕಟ್ಟ ಶಿವರಾಜ ಉಪಾಧ್ಯಾಯರವರ ನೇತೃತ್ವದಲ್ಲಿ ಸಂಪನ್ನಗೊಂಡಿತು.
ಮಾ. 14ರಿಂದ ಮಾ. 22ರವರೆಗೆ ಶ್ರೀ ಕ್ಷೇತ್ರ ಪಡುಬಿದ್ರಿಯ ವರ್ಷಾವಧಿ ಮಹೋತ್ಸವವು ನಡೆಯಲಿರುವುದು.
ಮಾ. ೩೦ರಿಂದಲೇ ಶ್ರೀ ದೇವಸ್ಥಾನದ ಜೀರ್ಣೋದ್ಧಾರ ಸಂಬಧಿಯಾಗಿ ವಿವಿಧ ಪ್ರಕ್ರಿಯೆಗಳಿಗೆ ಚಾಲನೆಯೂ ದೊರೆಯಲಿದೆ. ಮಾ. 30ರಂದು ವಿಜಯ ಗಣಪತಿ ಯಾಗ, ಮಾ. 31ರಂದು ಆಯತ ಸಂಖ್ಯಾ ಶಕ್ತಿ ಪಂಚಾಕ್ಷರೀ ಮಂತ್ರ ಯಾಗ, ಎ. 1ರಂದು ಆಯತ ಸಂಖ್ಯಾ ಗಣಪತಿ ಮೂಲಮಂತ್ರ ಯಾಗ, ಎ. 2ರಂದು ಪೂರ್ಣ ಮೃತ್ಯುಂಜಯ ಯಾಗ, ಅಪರಾಹ್ನ ಬಾಲಾಲಯಗಳಲ್ಲಿ ವಾಸ್ತು ರಕ್ಷೋಘ್ನ, ಎ. 3ರಂದು ಬೆಳಿಗ್ಗೆ 9-20ಕ್ಕೆ ಬಾಲಾಲಯಗಳಲ್ಲಿ ಶ್ರೀ ದೇವರುಗಳ ಪ್ರತಿಷ್ಠಾ ಕಾರ್ಯಕ್ರಮಾದಿಗಳು ನಡೆಯುವುದರೊಂದಿಗೆ ಶ್ರೀ ದೇಗುಲದ ಸಮಗ್ರ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದ ಪ್ರಕ್ರಿಯೆಗಳಿಗೆ ಚಾಲನೆಯೂ ದೊರೆಯಲಿದೆ.
ಧ್ವಜಾರೋಹಣಕ್ಕೂ ಮುನ್ನ ದೇವತಾ ಪ್ರಾರ್ಥನೆಯನ್ನು ನಡೆಸಲಾಯಿತು. ಶ್ರೀ ದೇಗುಲದ ಆನುವಂಶಿಕ ಮೊಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರ ರಾಜ ಅರಸು ಕಿನ್ಯಕ್ಕ ಬಲ್ಲಾಳ, ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ, ಕೊರ್ನಾಯ ಮನೆ ಶ್ರೀಪತಿ ಕೊರ್ನಾಯ, ಕಾರ್ಯನಿರ್ವಹಣಾಧಿಕಾರಿ ಕೆ. ರಾಜಗೋಪಾಲ ಉಪಾಧ್ಯಾಯ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾವಡ, ಕಾರ್ಯದರ್ಶಿ ನಡ್ಸಾಲು ಗುತ್ತು ಶ್ರೀನಾಥ್ ಹೆಗ್ಡೆ, ಅವರಾಲು ಕಂಕಣಗುತ್ತು ಗುತ್ತಿನಾರ್ ಕೃಷ್ಣ ಶೆಟ್ಟಿ, ಅನಿಲ್ ಶೆಟ್ಟಿ ಪೇಟೆಮನೆ, ಅಶೋಕ್ ಸಾಲ್ಯಾನ್, ಪ್ರಕಾಶ್ ಶೆಟ್ಟಿ ಪಡುಹಿತ್ಲು, ಮಾಧವ ಶೆಟ್ಟಿ, ಪಿ. ಕೆ. ಸದಾನಂದ, ವೈ. ಸುಕುಮಾರ್, ಪಾತ್ರಿ ಹರಿನಾರಾಯಣ ರಾವ್, ಕೊರ್ನಾಯ ಗಿರೀಶ್ ರಾವ್, ನಟರಾಜ್ ಪಿ. ಎಸ್., ಜಗದೀಶ ರಾವ್, ಬಾಲಪ್ಪ ರಾಮಚಂದ್ರ ರಾವ್, ವೈ. ಸುರೇಶ್ ರಾವ್, ನಾರಾಯಣ ರಾವ್ ಕಿನ್ನಿಶಂಕರ, ರಮಾಕಾಂತ ರಾವ್, ಸದಾಶಿವ ಪಡುಬಿದ್ರಿ, ವಿಷ್ಣುಮೂರ್ತಿ ಆಚಾರ್ಯ, ಶ್ರೀಧರ ಆಚಾರ್ಯ ಮತ್ತಿತರರಿದ್ದರು.