ನೆರೆಮನೆಯವನಿಗೆ ಕಾರಿನಿಂದ ಗುದ್ದಿ ಕೊಲೆಗೆ ಯತ್ನ : ಮಹಿಳೆಗೂ ಡಿಕ್ಕಿ, ನಿವೃತ್ತ ಬಿ ಎಸ್ ಎನ್ ಎಲ್ ನೌಕರ ಪೊಲೀಶ್ ವಶ (Attempted murder by hitting neighbor with car: Woman also hit, retired BSNL employee taken into police custody)

ನೆರೆಮನೆಯವನಿಗೆ ಕಾರಿನಿಂದ ಗುದ್ದಿ ಕೊಲೆಗೆ ಯತ್ನ : ಮಹಿಳೆಗೂ ಡಿಕ್ಕಿ, ನಿವೃತ್ತ ಬಿ ಎಸ್ ಎನ್ ಎಲ್ ನೌಕರ ಪೊಲೀಶ್ ವಶ
(Mangaluru) ಮಂಗಳೂರು: ಗುರುವಾರ ಸಂಜೆ ಬಿಜೈ ಕಾಪಿಕಾಡಿನಲ್ಲಿ ನಿವೃತ್ತ ಬಿಎಸ್ಸೆನ್ನೆಲ್ ನಿವೃತ್ತ ನೌಕರನೋರ್ವರು ಹಳೆ ದ್ವೇಷದಲ್ಲಿ ನೆರೆಮನೆಯವನನ್ನೇ ಕಾರು ನಿಂದ ಡಿಕ್ಕಿ ಹೊಡೆದು ಕೊಲೆಗೆ ಯತ್ನಿಸಿದ ಘಟನೆ ಘಟಿಸಿದೆ.
ಕಾರನ್ನು ವೇಗವಾಗಿ ಚಲಾಯಿಸಿದ ವೇಳೆ ನೆರೆಮನೆಯ ವ್ಯಕ್ತಿ ಸಮೇತ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಗುದ್ದಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಸತೀಶ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿ ಕಾರನ್ನು ವಶಕ್ಕೆ ಪಡೆದಿದ್ದಾರೆ.
ಸತೀಶ್ ಮತ್ತು ಮುರಳಿ ಪ್ರಸಾದ್ ಎಂಬವರು ಅಕ್ಕಪಕ್ಕದ ನಿವಾಸಿಗಳಾಗಿದ್ದು, ಯಾವುದೋ ವಿಚಾರಕ್ಕೆ ಜಗಳ ಉಂಟಾಗಿತ್ತು.
ಗುರುವಾರ ಸಂಜೆ ಮುರಳಿ ಬೈಕಿನಲ್ಲಿ ಮನೆಯತ್ತ ಬರುತ್ತಿದ್ದ ವೇಳೆ ಕೊಲ್ಲುವ ಉದ್ದೇಶದಿಂದ ಸತೀಶ್ ಕುಮಾರ್ ತನ್ನ ಮಾರುತಿ ಕಾರಿನಲ್ಲಿ ಹಿಂಬದಿಯಿಂದ ವೇಗವಾಗಿ ಚಲಾಯಿಸಿಕೊಂಡು ಬಂದು ಗುದ್ದಿದ್ದಾನೆ. ಈ ವೇಳೆ ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಗೂ ಡಿಕ್ಕಿಯಾಗಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮುರುಳಿ ಅಲ್ಪಸ್ವಲ್ಪ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದರೆ, ಮಹಿಳೆ ಕಾಂಪೌಂಡ್ ಗೋಡೆಯ ಮೇಲಕ್ಕೆ ಎಸೆಯಲ್ಪಟ್ಟು ತಲೆ ಕೆಳಗಾಗಿ ಸಿಕ್ಕಿಕೊಂಡಿದ್ದರು.
ಸ್ಥಳೀಯ ನಿವಾಸಿಗಳು ಓಡಿ ಬಂದು ಗೋಡೆಯಲ್ಲಿ ಸಿಕ್ಕಿಕೊಂಡಿದ್ದ ಮಹಿಳೆಯನ್ನು ಕೆಳಕ್ಕಿಳಿಸಿ ಉಪಚರಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
2023ರಲ್ಲಿ ಮುರುಳಿ ಪ್ರಸಾದ್ ಅವರ ತಂದೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಸತೀಶ್ ಕಾರನ್ನು ಗುದ್ದಿ, ಸಾಗಿದ್ದು ಉರ್ವಾ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಇದೀಗ ಮಗನ ಕೊಲೆ ಮಾಡುವ ಉದ್ದೇಶದಿಂದ ಕೃತ್ಯ ಎಸಗಲಾಗಿದೆ ಎಂದು ಶಂಕಿಸಲಾಗಿದೆ.