# Tags
#ಅಪರಾಧ #ವಿಡಿಯೋ

ಎರ್ಮಾಳು ತೆಂಕ : ಸರಕಾರಿ ಜಾಮೀನಿನಲ್ಲಿ ಕಾಮಗಾರಿ, ಗಡಿಕಲ್ಲು ನಾಪತ್ತೆ, ಸರ್ವೇಯರ್‌ ಹಿಂದಕ್ಕೆ(Ermal Tenka: boundary stone missing, surveyor withdraws the survey)

ಎರ್ಮಾಳು ತೆಂಕ : ಸರಕಾರಿ ಜಾಮೀನಿನಲ್ಲಿ ಕಾಮಗಾರಿ, ಗಡಿಕಲ್ಲು ನಾಪತ್ತೆ, ಸರ್ವೇಯರ್‌ ಹಿಂದಕ್ಕೆ

 (Thenka Yermal) ತೆಂಕ ಎರ್ಮಾಳು: ಕಳೆದ ತಿಂಗಳ ಫೆ. 27ರಂದು ಎರ್ಮಾಳು ತೆಂಕ ಸಮುದ್ರ ಕಿನಾರೆಯಲ್ಲಿ ಆಕ್ರಮ ಚರಂಡಿ ನಿರ್ಮಾಣ ಮಾಡುತ್ತಿದ್ದ ರೆಸಾರ್ಟ್ ನವರ ಕಾಮಗಾರಿಯನ್ನು ಸ್ಥಳೀಯರು ಆಕ್ಷೇಪಿಸಿ, ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್ ಅವರಿಗೆ ದೂರು ನೀಡಿದ್ದರು.

  ಎರ್ಮಾಳು ತೆಂಕದಲ್ಲಿ ಕಾರ್ಯಾಚರಿಸುತ್ತಿರುವ ರೆಸಾರ್ಟ್ ಮಾಲೀಕರು ಸರ್ಕಾರಿ ಜಾಗದಲ್ಲಿರುವ ಪರಂಬೋಗು ತೋಡನ್ನು ಅಗಲೀಕರಣಗೊಳಿಸುವ ಕಾಮಗಾರಿ ನಡೆಸುತ್ತಿದ್ದರು. ಸ್ಥಳೀಯ ಗ್ರಾಮಸ್ಥರು ಈ ಕಾಮಗಾರಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಅವರ ಯಾವುದೇ ಮಾತನ್ನು ಕೇಳದೆ ಕಾಮಗಾರಿ ಮುಂದುವರಿಸಿದ್ದರು.

ಘಟನಾ ಸ್ಥಳಕ್ಕೆ ಕಾಪು ತಹಶೀಲ್ದಾರ್ ಡಾ. ಪ್ರತಿಭಾರವರು   ಆಗಮಿಸಿ, ಸ್ಥಳೀಯರಿಂದ ಮತ್ತು ರಿಸಾರ್ಟ್‌ ಮಾಲೀಕರ ಮಾತನ್ನು ಸಾವಕಾಶವಾಗಿ ಆಲಿಸಿದ್ದರು. ಗ್ರಾಮಸ್ಥರ ಹಾಗೂ ರೆಸಾರ್ಟ್‌ನವರ  ಮಾತನ್ನು ಆಲಿಸಿದ ತಹಶೀಲ್ದಾರ್, ಯಾವುದೇ ಕಾರಣಕ್ಕೂ ಸರಕಾರಿ ಜಾಗದಲ್ಲಿ ಖಾಸಗಿಯವರು ಕಾಮಗಾರಿ ಮಾಡಕೂಡದು. ಏನಿದ್ದರೂ ಸರ್ಕಾರದ ಆದೇಶದಂತೆ ನಡೆಯಬೇಕು. ಈಗಾಗಲೇ ಗ್ರಾಮ ಪಂಚಾಯತ್ ಈ ಕಾಮಗಾರಿಗೆ ಆಕ್ಷೇಪ ವ್ಯಕ್ತಪಡಿಸಿದೆ. ಆ ಕಾರಣದಿಂದ  ಎಲ್ಲಿ ಕಾಮಗಾರಿ ನಡೆದಿದೆಯೋ ಅದನ್ನು ತುರ್ತು ನಿಲ್ಲಿಸಬೇಕು. ಆದೇಶವನ್ನು ಧಿಕ್ಕರಿಸಿ ಕಾಮಗಾರಿ ಮುಂದುವರಿಸಿದರೆ, ಕಾನೂನು ಕ್ರಮ ಕೈಗೊಳ್ಳುವಂತೆ ಕಂದಾಯ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಆದೇಶ ನೀಡಿದರು. ತಾಲೂಕು ಸರ್ವೇಯರ್‌ ಸರ್ವೇ ನಡೆಸಿದ ಬಳಿಕ ಖಾಸಗಿ ಜಾಗವಾಗಿದ್ದಲ್ಲಿ ಕಾಮಗಾರಿ ಮುಂದುವರಿಸಬಹುದೆಂದು ಆದೇಶಿಸಿದ್ದರು. ಆ ತನಕ ಕಾಮಗಾರಿಗೆ ತಡೆ ಆದೇಶ ನೀಡಿದ್ದರು.

ಇಂದು ಬೆಳಿಗ್ಗೆ ಕಾಪು ತಾಲೂಕು ಸರಕಾರಿ ಭೂಮಾಪಕ  ಸುರೇಶ್‌ರವರು ತಮ್ಮ ತಂಡದೊಂದಿಗೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. ಸ್ಥಳ ಮಾಪನ ಮಾಡಲು ಗಡಿ ಕಲ್ಲು ಹುಡುಕಾಡಿದಾಗ, ಎಲ್ಲೂ ಗಡಿಕಲ್ಲು ಸಿಕ್ಕಿಲ್ಲ. ಸುಮಾರು ಒಂದು ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಹುಡುಕಾಟ ನಡೆಸಿದರೂ, ಒಂದೇ ಒಂದು ಗಡಿಕಲ್ಲು ಸಿಕ್ಕಿಲ್ಲ.

ಗಡಿಕಲ್ಲು ಸಿಗದ ಕಾರಣ ಸರ್ವೇ ಅಸಾಧ್ಯವಾಗಿದ್ದು, ಮುಂದಿನ ಮಂಗಳವಾರ ಸರ್ವೇ ಮಾಡುವುದೆಂದು ಹೇಳಿ ತೆರಳಿದರು.

ತೆಂಕ ಗ್ರಾಪಂ ಗ್ರಾಮ ಕರಣಿಕ ವಿಜಯ್, ತೆಂಕ ಗ್ರಾಪಂ ಮಾಜಿ ಅಧ್ಯಕ್ಷೆ ಜಯಶ್ರೀ, ಸಿಬ್ಬಂದಿ ಗಳು, ಸ್ಥಳೀಯರಾದ ಲೀಲಾಧರ ಸಾಲ್ಯಾನ್‌, ಯತೀಶ್‌ ಸುವರ್ಣ, ಅಶೋಕ್‌, ಸುಶಾಂತ್‌ ಬಂಗೇರಾ, ರಮೇಶ್‌, ಶಂಕರ ಪೂಜಾರಿ ಉಪಸ್ಥಿತರಿದ್ದರು.

ಪಡುಬಿದ್ರಿ ಪೊಲೀಸರು ಸೂಕ್ತ ಬಂದೋಬಸ್ತು ವಹಿಸಿದ್ದರು.  

Leave a comment

Your email address will not be published. Required fields are marked *

Emedia Advt3