CA ಪರೀಕ್ಷೆಗಳ ಫಲಿತಾಂಶ ಪ್ರಕಟ
ಹೊಸದಿಲ್ಲಿ: ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಬುಧವಾರ 2023ನೇ ಸಾಲಿನ ಸಿಎ(ಚಾರ್ಟರ್ಡ್ ಅಕೌಂಟೆಂಟ್) ಇಂಟರ್ ಮತ್ತು ಫೈನಲ್ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಸಿಎ ಇಂಟರ್ ಪರೀಕ್ಷೆಯಲ್ಲಿ ಹೈದರಾಬಾದ್‌ನ ವೈ.ಗೋಕುಲ್ ಸಾಯಿ ಶ್ರೀಕರ್ ಶೇ.86ರಷ್ಟು ಅಂಕಗಳೊಂದಿಗೆ ಪ್ರಥಮ ರ್‍ಯಾಂಕ್ ಪಡೆದಿದ್ದಾರೆ. ಅದೇ ರೀತಿ ಶೇ.85.25ರಷ್ಟು ಅಂಕಗಳನ್ನು ಪಡೆದ ಪಟಿಯಾಲದ ನೂರ್ ಸಿಂಗ್ಲಾ ಮತ್ತು ಶೇ.84.75ರಷ್ಟು ಅಂಕಗಳನ್ನು ಪಡೆದ ಮುಂಬಯಿಯ ಕಾವ್ಯ ಸಂದೀಪ್ ಕ್ರಮವಾಗಿ ಎರಡನೇ ಮತ್ತು ಮೂರನೇ ರ್‍ಯಾಂಕ್ ಪಡೆದಿದ್ದಾರೆ. ಇನ್ನೊಂದೆಡೆ ಸಿಎ […]