ಉಡುಪಿ : ಡಾ. ಕಾತ್ಯಾಯಿನಿ ಕುಂಜಿಬೆಟ್ಟು, ರಾಜಾರಾಮ್ ತಲ್ಲೂರಿಗೆ ಪ್ರಶಸ್ತಿ ಪ್ರದಾನ (Udupi : Award presentation to Dr. Katyayini Kunjibettu and Rajarama Thallura)

ಉಡುಪಿ : ಡಾ. ಕಾತ್ಯಾಯಿನಿ ಕುಂಜಿಬೆಟ್ಟು, ರಾಜಾರಾಮ್ ತಲ್ಲೂರಿಗೆ ಪ್ರಶಸ್ತಿ ಪ್ರದಾನ
(Udupi) ಉಡುಪಿ: ಕ್ರಿ.ಶ 1930 ರಲ್ಲಿ ಸ್ಥಾಪನೆಗೊಂಡಿರುವ ಹಿರಿಯ ಸಂಸ್ಥೆಯಾದ ಶಿವಮೊಗ್ಗದ ಕರ್ನಾಟಕ ಸಂಘದ ಈ ಬಾರಿಯ ‘ಎಸ್. ವಿ. ಪರಮೇಶ್ವರ ಭಟ್ಟ’ ಪುಸ್ತಕ ಪ್ರಶಸ್ತಿಗೆ ಉಡುಪಿಯ ರಾಜಾರಾಮ್ ತಲ್ಲೂರು ಅವರ ಡಾಕ್ಯುಮೆಂಟ್ ಎಂಬ ಅನುವಾದಿತ ಕೃತಿ ಹಾಗೂ ‘ಎಂ. ಕೆ. ಇಂದಿರಾ ‘ ಪುಸ್ತಕ ಪ್ರಶಸ್ತಿಗೆ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ‘ಇರವಿನ ಅರಿವು’ ವಿಮರ್ಶಾಕೃತಿ ಪಾತ್ರವಾಗಿದ್ದು, ಸೆ. 28 ರಂದು ಶಿವಮೊಗ್ಗದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನೆರವೇರಿತು.
ಸಮಾರಂಭದಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಶರತ್ ಅನಂತಮೂರ್ತಿಯವರು ಪುಸ್ತಕ ಪ್ರಶಸ್ತಿಗಳನ್ನು ಪ್ರದಾನಿಸಿದರು.
ಸಮಾರಂಭದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಸುಂದರರಾಜ ಹಾಗೂ ಕಾರ್ಯದರ್ಶಿ ಆಶಾಲತಾ ಅವರು ಉಪಸ್ಥಿತರಿದ್ದರು.